ಕರಮ್‌ಜ್ಯೋತಿ ದಲಾಲ್ ಒಬ್ಬ ಭಾರತೀಯ ಪ್ಯಾರಾ ಅಥ್ಲೀಟ್. ಅವಳು ಡಿಸ್ಕಸ್ ಎಸೆತಗಾರ್ತಿ. ಅವಳು ರೋಹ್ಟಕ್ ಮೂಲದವಳು. ಅವರು ಐ.ಪಿ.ಸಿ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕವನ್ನು ಗೆದ್ದರು. ಅವರು ರೋಹ್ಟಕ್‌ನ ಮಹರ್ಷಿ ದಯಾನಂದ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದರು ಮತ್ತು ಹರಿಯಾಣದಿಂದ ಬಂದವರು. == ಆರಂಭಿಕ ಜೀವನ ಮತ್ತು ವೃತ್ತಿಜೀವನ == ಕರಮ್‌ಜ್ಯೋತಿ ಅವರು ಟೆರೇಸ್‌ನಿಂದ ಬಿದ್ದು ಅಪಘಾತವಾಗುವ ಮೊದಲು ಕಬಡ್ಡಿ ಆಟಗಾರ್ತಿಯಾಗಿದ್ದರು. ಅವಳು ಡಿಸ್ಕಸ್ ಎಸೆತಗಾರ್ತಿ ಮತ್ತು ತರಬೇತುದಾರರು. ಕರಮ್‌ಜ್ಯೋತಿ ದಲಾಲ್ ಪ್ರಸ್ತುತ ಹರಿಯಾಣದ ಕ್ರೀಡೆ ಮತ್ತು ಯುವ ವ್ಯವಹಾರಗಳ ಇಲಾಖೆಯಲ್ಲಿ ತರಬೇತುದಾರರಾಗಿದ್ದಾರೆ. ಅವಳು ತನ್ನ ಚಿಕ್ಕಮ್ಮನ ಮೂಲಕ ಪ್ಯಾರಾ ಅಥ್ಲೆಟಿಕ್ಸ್ ಅನ್ನು ಕಲಿತಳು. === ಪದಕಗಳು === ೨೦೧೭ ರ ದುಬೈನಲ್ಲಿ ನಡೆದ ಫಜಾ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಚಿನ್ನದ ಪದಕ. ಬೀಜಿಂಗ್‌ನಲ್ಲಿ ೨೦೧೪ ರಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಎರಡು ಕಂಚಿನ ಪದಕಗಳು. ೨೦೧೪ರ ಏಷ್ಯನ್ ಗೇಮ್ಸ್‌ನಲ್ಲಿ ವಿಶ್ವದಲ್ಲಿ ೮ನೆಯ ರ್‍ಯಾಂಕ್ . ೨೦೧೪ ರಲ್ಲಿ ಲಂಡನ್‌ನಲ್ಲಿ ನಡೆದ ವಿಶ್ವ ಪ್ಯಾರಾ-ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ. == ಉಲ್ಲೇಖಗಳು ==